Friday 24 February 2012

ಅವೇಳೆನಾ ಇವಳು(?) !
     ಇವಳೇನಾ ನನೋಳಗಿರುವವಳು ? 

ಅವಳಿಗೆನಾ ಈ (ಕಳೆದ ) ಏಳು ಋತುಗಳು ?..
     ಇವಳಿಗಾಗೆನಾ ? ಇನ್ನೆಳು (ಮು0ಬರುವ) ಋತುಗಳು ?...


ಹೂ ಹೃದಯದ ಜಾತಿಯವಳು .....
ಬೀಜದೊಳಗಣ  ಹೂವಂತೆ  ಇಣುಕಿಬರುವವಳು.(ಮೊಳೆತು).. 
ಹಸಿರು ಮಾಗಿ ನನ್ನ ಪ್ರೇಮದ ಹೂ ನಿನ್ ಒಡಲಲಿ ಎಂದು ಅರಳುವುದು !
ನಿನ್  ಹದಿನೇಳು ವಸಂತಗಳು ನನ್ನೇಳು  ವಸಂತಗಳ ಹಣಕ ಮಾಡುತಿಹುದು!
ಎದೆಯ ತಲ್ಲಣವು ಇನ್ನೆಳು ಚೈತ್ರಗಳ ಕಡೆ ಮುನಿಸಿ   ನಿನಗಾಗಿ  ಮುಖಮಾಡಿಹುದು !..


ಗೆಳತಿ!! ನನ್ನೊಲುಮೆಯ ಮೊಗ್ಗು ನಿನ್ ಎದೆಯಲಿ ಎಂದು ಹಿಗ್ಗುವುದು ?
ಯಾವ ವಸಂತಕ್ಕೆ ನಲ್ಲೆ ? ನನ್ನ ಪ್ರೆಮದುಹೂ ನಿನ್ನ ಮುಡಿಯ ಸೇರುಹುದು ???






                                                                             ರಂಗ(ಇ&ಸಿ)

Sunday 20 November 2011

ಕರಗುವ ಹೃದಯ 

ನಿನ್ ಹಸಿ ಪಾದದ ಹುಸಿ ಚಿತ್ರ .
ನನ್ ಹುಸಿರುಗಟ್ಟಿಸಿದೆಯಲ್ಲೇ !!


ಗಲ್ ಗಲ್ ಎಂದು ನಾಧವ  ಚೆಲ್ಲುವ 
ನಿನ್ ಈ.. ಕಾಲ್ಗೆಜ್ಜೆ ನನ್ನ ಮತಿಗೆಡಿಸಿದೆಯಲ್ಲೇ !!


ಎಲೆಗಳು ಉದಿರಿದ ಮರದೊಳ ಅರಳಿದ 
ಚೈತ್ರದೂವಿನ ಹೃದಯದನ್ತಿರುವೆಯಲ್ಲೇ .!!


ಗಾಳಿಯೇ ಇಲ್ಲದಿರು, ಗಾಬರಿಗೊಳ್ಳದೆ ..
ಉಸಿರಾಡುತಿರುವ ಎನ್ನ ಹೃದಯಚೈತನ್ಯದನ್ತಿರುವೆಯಲ್ಲೇ  !!


ಪಿಳಿ ಪಿಳಿ ಕಣ್ಬಿಡೋ ,ನಿನ್  ಈ ಮೊರೆಯು ..
ತಿಳಿಕೊಳದಲ್ಲರಳಿದ ಕೆಂದಾವರೆಯನ್ತಿದೆಯಲ್ಲೇ !!


ನೀನಕ್ಕರೆ ಇಲ್ಲೇ, ಎನ್ ಹೃದಯ ಚೈತನ್ಯ..
ಕಮರಿ,ಕರಗುವ  ಪುತ್ತಳಿಯಾಗಿದೆಯಲ್ಲೇ.!!

ಈ ಕರಗುವ ಪುತ್ತಳಿಗೆ ಪುನರ್ ಚೈತನ್ಯ ನೀ ತಾನೇ ?.... ನೀಡಬಲ್ಲೆ !!
                                                                   
                                                        ರಂಗ (ಇ&ಸಿ )







Friday 2 September 2011

                                                                               ನಾ ಕರಗಿದರೆ ಬಿಸಿಲೆ ನೀನೆ  ಹೊಣೆ !!!!


ಹೃದಯ ಮಾತಾಡಿತ? 

ಕರೆಯ ಹೊರಟೆ ಕನಸಿನ  ಹರಟೆ |
ಕನಸಿನ ಜೊತೆ ವಾಸ್ತವದ ಪ್ರಯಾಣ ಹೊರಟೆ!



ನಕ್ಕಂತಾಯಿತು ! ನಯವಾಗಿ ನನಗೆ !
ನನ್ನ ಹೃದಯ ಮಾತಾಡಿತಾ?....

ಖುಷಿಯಲಿ ಕುಣಿದಿದೆ ಹೃದಯ, ಭಯವಾಗಿದೆ ನನಗೆ! 
ಗುಡುಗಿನ ಮಳೆಬರುವನ್ತಿದೆ..ನನ್ನೆದೆಯಲಿ !!!

ನುಡಿದಂತಾಗಿದೆ.. ನನ್ನ ಹೃದಯ ..
ಅದರೊಡನೆ ಮಾತಾಡಿದೆಯಾ? ಓ ನನ್ನವಳ  ಹೃದಯ !!


ನನ್ನೆದಯ ಕಣ್ಣು ಮಿಸುಕಿನ ಸಪ್ಪಳ ಕೇಳುತಿದೆ ನನಗೆ !!!
ಅದಕಾಗಿ ನೀ ನನ್ನ ತಿರುಗಿ ನೋಡಿದೆಯ ! ಓ ನನ್ನವಳ ಹೃದಯ ?

ಕೇಳುವೆನು ತಾಳು ನನ್ನವಳ ಏ ಇವಳೇ  ಮಾತಾಡಿತ ನನ್ನಹೃದಯ? 
                                                    
                                                                         ರಂಗ (ಇ &ಸಿ ) 






Thursday 1 September 2011

ಹೃದಯ ಮಾತಾಡಿತ?

ಹೃದಯ ಮಾತಾಡಿತ? 

ಕರೆಯ ಹೊರಟೆ ಕನಸಿನ  ಹರಟೆ |
ಕನಸಿನ ಜೊತೆ ವಾಸ್ತವದ ಪ್ರಯಾಣ ಹೊರಟೆ!



ನಕ್ಕಂತಾಯಿತು ! ನಯವಾಗಿ ನನಗೆ !
ನನ್ನ ಹೃದಯ ಮಾತಾಡಿತಾ?....

ಖುಷಿಯಲಿ ಕುಣಿದಿದೆ ಹೃದಯ, ಭಯವಾಗಿದೆ ನನಗೆ! 
ಗುಡುಗಿನ ಮಳೆಬರುವನ್ತಿದೆ..ನನ್ನೆದೆಯಲಿ !!!

ನುಡಿದಂತಾಗಿದೆ.. ನನ್ನ ಹೃದಯ ..
ಅದರೊಡನೆ ಮಾತಾಡಿದೆಯಾ? ಓ ನನ್ನವಳ  ಹೃದಯ !!


ನನ್ನೆದಯ ಕಣ್ಣು ಮಿಸುಕಿನ ಸಪ್ಪಳ ಕೇಳುತಿದೆ ನನಗೆ !!!
ಅದಕಾಗಿ ನೀ ನನ್ನ ತಿರುಗಿ ನೋಡಿದೆಯ ! ಓ ನನ್ನವಳ ಹೃದಯ ?

ಕೇಳುವೆನು ತಾಳು ನನ್ನವಳ ಏ ಇವಳೇ nanna




ಅವಳು


ಅವಳು

ಒದ್ದೆ ಪಾದಗಳ ಹೆಜ್ಜೆ ಜಾಡಿನಲ್ಲಿ ನಡೆಯಹೊರಟವಳು 
ಕಾರಿರುಳ ಬಾನಿನಲಿ ಚಂದಿರನ ಹುಡುಕಿದಳು
ನದಿಯಲ್ಲದವಳು ಎಲೆಯಮೇಲೆ ಬಿದ್ದ ಮಳೆಹನಿಯಂಥವಳು
ಕಡಲ ಸೇರಲು ಹೊರಟಳು.
ದನಿಯಿಲ್ಲದವಳು ಮೌನಿ ಶಿಲೆಯಂಥವಳು
ಎದೆರಾಗವಾಗಲವಣಿಸಿದಳು.
ಬಾನಲ್ಲಿ ರವಿ ಜಾರಿದಾಗ ಕವಿದ ಮುಸ್ಸಂಜೆಯಂಥವಳು
ಎಣ್ಣೆಯಾರಿದ ಹಣತೆಯನು ಕಣ್ಬೆಳಕಿನಲಿ ಬೆಳಗುವವನಿಗಾಗಿ ಕಾದಳು.
ಚದುರಿದ ಕನಸುಗಳ ಹೆಕ್ಕಿತರಲು ಹೊರಟವಳು
ಹೊಳೆವ ಕಂಗಳಲಿ ನಕ್ಕವಳು
ಅಂಗಳದ ಗಿಡದಲ್ಲಿ ಬಿರಿದ ಮಲ್ಲಿಗೆಯಂಥವಳು
ವೈಶಾಖದ ಸುಡುಹಗಲಿನಲಿ
ಒದ್ದೆ ಪಾದಗಳ ಜಾಡಿನಲ್ಲಿ ನಡೆಯಹೊರಟಳು
ನಿನ್ನೆಯಾಗಸದಲಿ ಕಂಡಿದ್ದ ಚುಕ್ಕಿಯಂತೆ ಕಳೆದುಹೋದಳು.

ಕರಿ ನೆರಳು .....!

ನನ್ನದೇ ನೆರಳು ಉದ್ದುದ್ದವಾಗಿದೆ...
ದೂರದಾ ಬೆಳಕು ನನ್ನ ಮೇಲೆ ಬಿದ್ದಾಗ....
ನಿನ್ನದೇ ನೆನಪು ಓಡೋಡಿ ಬಂದಿದೆ,
ಮಗ್ಗುಲಿನ ಮಿಂಚುಹುಳ ಮಿನುಗಿದಾಗ....

ಕಡುಗತ್ತಲೆಗೆ ಕಣ್ಣು ಕೂಡ ಸೋತಿದೆ,
 
ನನಸಾಗದೇ ಕಾಡುವ ಕನಸಿನ ಹಾಗೆ.....
ಕಡುಗಪ್ಪು ಬಣ್ಣದಲೂ ಚಿತ್ತಾರ ಮೂಡಿದೆ,
ಕಾಣದೆಲೇ ಕುಣಿಸುವ ಕಾಲನ ಹಾಗೆ....

ಕತ್ತಲೆಯ ಮಡಿಲಿನಲೂ ಏನೋ ಒಂದು ಹಿತವಿದೆ,
 
ಬಿಗಿದಷ್ಟೂ ಜಾರುವ ಪ್ರೀತಿಯ ಹಾಗೆ....
ಕಾಣದಿಹ ಕಪ್ಪಿನಲೂ ಏನೇನೋ ಒಗಟಿದೆ...
ಗುರಿಯಿರದ ದಾರಿಯ ತಿರುವಿನ ಹಾಗೆ.....

ಹೊರಗಿನ ಕತ್ತಲಲೂ ಮನದ ದೀಪ ಬೆಳಗು
ತಿದೆ, 
ಬದುಕಿಗೇ ದಾರಿ ತೋರುವ ಕನಸಿನ ಹಾಗೆ.....
ಕತ್ತಲಿನ ದಾರಿಯಲ್ಲೂ ಬೆಳಕ ನಿರೀಕ್ಷೆಯಿದೆ,
ಕಾಡಿದರೂ ಕಾಪಾಡುವ ದೇವರ ಹಾಗೆ......

Thursday 23 June 2011

ಹಾಗೇ, ನಿನ್ನ ಬರುವಿಕೆಯ ಕಾತರಕ್ಕೆ ಕವಿತೆಯೊಂದರ ನೆನಪು;


ಜೀವ ಪ್ರೀತಿಯ ಹನಿಯೆ..

ಕಾಡಿನೆದೆಗೆ ಸುರಿವ

ಜೀವ ಪ್ರೀತಿಯ ಹನಿಯೆ,

 

ಹೂತ ಕನಸ

ಬೀಜಗಳಿಗೆ ಕೂಡಲೇ

ಪ್ರಾಣವ ನಿಜ ತ್ರಾಣವ ಕೊಡು.

 

ನಾಳೆಯ ಹೂವಿಗೆ

ಈಗಲೇ ಬಣ್ಣವ,

ಬಿನ್ನಾಣವ ಕೊಡು.

 

ಖುಷಿಯ ಹಾಡುಹಕ್ಕಿಗೆ

ಇಂದೇ ದಣಿಯದ

ಇನಿದನಿಯ ಕೊಡು.

 

ಭೀತಿಯ ಹೆಬ್ಬುಲಿಗೂ

ಕಸುವ, ಮೃಗ- ಹಸಿವ

ತಪ್ಪದೇ ಕೊಡು.

 

ನಿನ್ನ ಕರುಣೆಯ ಆಟಕೆ

ಉರುಳಿಸು ದಾಳವ ಈ ಕ್ಷಣವೆ…